P. H. Neeralakeri

Mission

Goal-oriented, ambitious, visionary & multi-faceted professional and a successful legal practitioner. A well-respected individual, actively served in social & community arenas. Holistic & honest party worker since three decades. Also, an active member of Bharatiya Janata Party from Dharwad District, Karnataka.

Natural and persuasive communicator recognized among colleagues for the core ability to energize and inspire individuals & communities to work towards achieving a common goal. I am aspiring to be BJP Candidate from Dharwad Member of Parliament Constituency.

View Profile

ನನ್ನ ಪ್ರೀತಿಯ ಧಾರವಾಡ ಕ್ಷೇತ್ರದ ಆತ್ಮೀಯರೇ...

ಸಾಹಿತ್ಯದ ನಗರ ಧಾರವಾಡ ಕರ್ನಾಟಕದ ನಿಜವಾದ ಸಾಂಸ್ಕೃತಿಕ ಮತ್ತು ಶೈಕ್ಷಣಿಕ ಮಾತೃಭೂಮಿ. ಆ ಬಗ್ಗೆ ನಮಗೆಲ್ಲ ತುಂಬಾ ಹೆಮ್ಮೆ ಇದೆ.

" ಏನೂ ಇಲ್ಲದಿದ್ದಾಗ ಇದ್ದ ಶಾಂತಿ ನೆಮ್ಮದಿ ಸಂತೋಷ ಎಲ್ಲವೂ ಇದ್ದಾಗ ಅತೃಪ್ತಿ ಅಸಮಾಧಾನ ಸಂಘರ್ಷವಾಗಿ ಪರಿವರ್ತನೆ ಹೊಂದುತ್ತಿರುವ ಕಾಲಘಟ್ಟದಲ್ಲಿ ನಾವಿದ್ದೇವೆ " ವೈಯಕ್ತಿಕವಾಗಿ ಮತ್ತು ಸಾಮಾಜಿಕವಾಗಿ ಅನಾರೋಗ್ಯಕರ ವಾತಾವರಣ ಸೃಷ್ಟಿಯಾಗಿದೆ.

ಆದ್ದರಿಂದ ಈಗಲಾದರೂ ಕನಿಷ್ಠ ನಮ್ಮ ಕ್ಷೇತ್ರದ ವ್ಯಾಪ್ತಿಯಲ್ಲಿ ಒಂದಷ್ಟು ಆರೋಗ್ಯಕರ ವಾತಾವರಣ ನಿರ್ಮಾಣ ಮಾಡುವ ಜವಾಬ್ದಾರಿ ನಮ್ಮ ಮೇಲಿದೆ.

ನಾನು ............. ಈ ನಿಟ್ಟಿನಲ್ಲಿ ಒಂದು ಕ್ರಾಂತಿಕಾರಕ ಬದಲಾವಣೆಗಳನ್ನು ಮಾಡಲು ಪ್ರಯತ್ನಿಸುತ್ತಿದ್ದೇನೆ. ಅದರ ಭಾಗವಾಗಿ ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಧಾರವಾಡ ಕ್ಷೇತ್ರದಿಂದ ಸ್ಪರ್ಧಿಸಲು ಇಚ್ಚಿಸಿದ್ದೇನೆ. ಏಕೆಂದರೆ ಅಧಿಕಾರದೊಂದಿಗೆ ಜನಪ್ರತಿನಿಧಿಯಾಗಿ ಸೇವೆ ಸಲ್ಲಿಸಿದರೆ ಅದರ ವ್ಯಾಪ್ತಿ ಪರಿಣಾಮ ಮತ್ತು ಫಲಿತಾಂಶ ವಿಶಾಲವಾಗಿರುತ್ತದೆ.

ನಾನು ಜನಪ್ರತಿನಿಧಿಯಾಗಿ ಆಯ್ಕೆಯಾದರೆ.........

ಇಡೀ ಕ್ಷೇತ್ರವನ್ನು ಒಂದು ಕುಟುಂಬ ಎಂದು ಪರಿಗಣಿಸಿ ಚುನಾವಣಾ ಸಮಯದ ಯಾವುದೇ ಭಿನ್ನಾಭಿಪ್ರಾಯಗಳನ್ನು ಮುಂದುವರಿಸದೆ ಸಮಗ್ರವಾಗಿ ಅಭಿವೃದ್ಧಿ ಪಡಿಸಲು ಯೋಜನೆ ರೂಪಿಸುತ್ತೇನೆ.

ನಮ್ಮ ಕ್ಷೇತ್ರದಲ್ಲಿ ಬರುವ ಎಲ್ಲಾ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಕಚೇರಿಗಳು, ಅವುಗಳ ದೂರವಾಣಿ ಸಂಖ್ಯೆ ಅಧಿಕಾರಿಗಳ ಹೆಸರು ಕೆಲಸ ಕಾರ್ಯಗಳ ವ್ಯಾಪ್ತಿ ಎಲ್ಲವನ್ನೂ ಒಳಗೊಂಡ ಸಂಪೂರ್ಣ ಮಾಹಿತಿಯನ್ನು ಪ್ರತಿ ಕುಟುಂಬದ ಸದಸ್ಯರಿಗೆ ಇರುವಂತೆ ಒಂದು ‌ಸಂಪರ್ಕ ಮಾಧ್ಯಮ ಕಲ್ಪಿಸುತ್ತೇನೆ. ಆ ಮುಖಾಂತರ ಸರ್ಕಾರದ ಎಲ್ಲಾ ಯೋಜನೆಗಳು ಪಾರದರ್ಶಕವಾಗಿ ಸಾರ್ವಜನಿಕರಿಗೆ ತಲುಪಿಸುವ ಉದ್ದೇಶ ಹೊಂದಿದ್ದೇನೆ.

ಶಿಕ್ಷಣ ಆರೋಗ್ಯ ಉದ್ಯೋಗ ಮತ್ತು ಸ್ವಚ್ಚತೆ ನನ್ನ ಕಾರ್ಯಕ್ಷೇತ್ರದ ಮಹತ್ವಪೂರ್ಣ ಯೋಜನೆಗಳು. ಆ ಮೂಲಕ ದೈಹಿಕ ಮತ್ತು ಮಾನಸಿಕ ಆರೋಗ್ಯ ರಕ್ಷಣೆ ಮತ್ತು ಜನರ ಜೀವನಮಟ್ಟ ಸುಧಾರಿಸುವ ಕನಸುಗಳನ್ನು ಹೊಂದಿದ್ದೇನೆ.

ಆಧುನಿಕ ಕಾಲದ ಬಹುದೊಡ್ಡ ಸಮಸ್ಯೆ ನಿರುದ್ಯೋಗ. ಅದಕ್ಕಾಗಿ ಒಂದು ಕಾರ್ಯಯೋಜನೆಯನ್ನು ರೂಪಿಸಿದ್ದೇನೆ. ರಾಜ್ಯಾದ್ಯಂತ ಪ್ರವಾಸ ಮಾಡಿ ಎಲ್ಲಾ ದೊಡ್ಡ ಕಂಪನಿಗಳನ್ನು ಸಂಪರ್ಕಿಸಿ ಕನಿಷ್ಠ ಆರು ತಿಂಗಳಿಗೆ ಒಂದು ಬಾರಿ ಧಾರವಾಡದಲ್ಲಿ ಉದ್ಯೋಗ ಮೇಳ ನಡೆಸಲಾಗುವುದು. ನಾನೇ ಖುದ್ದಾಗಿ ನಿಂತು ಎಲ್ಲಾ ರೀತಿಯ ಎಲ್ಲಾ ವರ್ಗದ ನಿರುದ್ಯೋಗಿಗಳಿಗೆ ಉದ್ಯೋಗ ದೊರಕಿಸಿಕೊಡಲು ಪ್ರಯತ್ನಿಸುವೆ.

ಯುವಕರ ಬಗ್ಗೆ ನನಗೆ ಅಪಾರ ಕಾಳಜಿ. ಅವರಿಗಾಗಿ ಮನಸ್ಸು ಸದಾ ಮಿಡಿಯುತ್ತದೆ. ದಾರಿ ತಪ್ಪುತ್ತಿರುವ ಅವರಿಗಾಗಿ ಬಾರುಗಳಿಗೆ ಪರ್ಯಾಯವಾಗಿ ಅಂತರರಾಷ್ಟ್ರೀಯ ಗುಣಮಟ್ಟದ ಡಿಜಿಟಲ್ ಗ್ರಂಥಾಲಯಗಳ ಸ್ಥಾಪನೆ, ಡಾಬಾಗಳಿಗಿಂತ ಕ್ರೀಡಾಂಗಣಗಳ ಸ್ಥಾಪನೆಗೆ ಆದ್ಯತೆ ನೀಡಿ ಇಡೀ ದೇಶಕ್ಕೆ. ಒಂದು ಮಾದರಿ ಕ್ಷೇತ್ರವನ್ನಾಗಿ ಮಾಡುವ ಹಂಬಲ ಹೊಂದಿದ್ದೇನೆ.

ಸಾಹಿತ್ಯ ಮತ್ತು ಸಾಂಸ್ಕೃತಿಕವಾಗಿ ಒಂದು ಹೊಸ ತಲೆಮಾರನ್ನು ಹುಟ್ಟುಹಾಕಲು ರಾಜ್ಯದ ಹಿರಿಯ ಪ್ರತಿಭಾವಂತರು ಸಾಧಕರನ್ನು ನಿಯಮಿತವಾಗಿ ಧಾರವಾಡಕ್ಕೆ ಕರೆಸಿ ವಿವಿಧ ಕಾರ್ಯಕ್ರಮಗಳನ್ನು ನಿರಂತರವಾಗಿ ಮಾಡುವ ಪ್ರಯತ್ನ ಸದಾ ಜಾರಿಯಲ್ಲಿರುತ್ತದೆ.

ಬಂಧುಗಳೇ,

ಇದು ಕೇವಲ ಒಣ ಆಶ್ವಾಸನೆಯಲ್ಲ. ಮಧ್ಯ ವಯಸ್ಸಿನ ನನ್ನ ಅಂತರಾಳದ ಆತ್ಮಸಾಕ್ಷಿಯ ನುಡಿಗಳು. ಇದನ್ನು ಖಂಡಿತ ನನ್ನ ಅವಧಿಯಲ್ಲಿ ಪೂರೈಸುವ ಗುರಿ ಹೊಂದಿದ್ದೇನೆ.

ಬಹುತ್ವ ಭಾರತ ಶ್ರೇಷ್ಠ ಭಾರತ ನಿರ್ಮಾಣ ಮಾಡಲು ಕೈ ಜೋಡಿಸೋಣ.

ಎಲ್ಲರಿಗೂ ತುಂಬು ಹೃದಯದಿಂದ ಧನ್ಯವಾದಗಳು.

ನಿಮ್ಮ ಪ್ರೀತಿಯ...

Read More

Facebook

YouTube

Voice of the People

image-1
image-1
image-1
image-1
image-1
image-1

lorem ipsum text init lorem ipsum text init

image-1
image-1

Video Gallery